ಹಾವೇರಿಯಲ್ಲಿ ೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ?
ಸಭೆಯಲ್ಲಿನ ಅಭಿಪ್ರಾಯಗಳು:
ರಾಣೆಬೆನ್ನೂರಿನಲ್ಲಿ ಅಗೋದು ಬೇಡ;ಹಾವೇರಿಯಿಂದ ಹೋಗೋದು ಬೇಡ.
ಮಾಸಣಗಿ ನೀ ರಾಜೀನಾಮೆ ಕೊಡು,ಹಾವೇರಿಲಿ ಸಮ್ಮೇಳನ ಮಾಡು.
ಜಿಲ್ಲಾಧ್ಯಕ್ಷರನ್ನು ಉಚ್ಚಾಟಿಸಲು ರಾಜ್ಯಾಧ್ಯಕ್ಷರಿಗೆ ಗಡುವು.
ಹಾವೇರಿ ಜಿಲ್ಲಾ ಅಧ್ಯಕ್ಷರಿಂದ ರಾಜ್ಯಾಧ್ಯಕ್ಷರಿಗೆ ಆಮೀಷ.
ಹಾವೇರಿ ಬಂದ್ ಗೆ ಕಾರಣೀಕರ್ತರೆಂದು ಪಡಗೋದಿ, ಹಿಟ್ನಳ್ಳಿ,ಆಲದಕಟ್ಟಿಯವರನ್ನು ಉಚ್ಚಾಟಿಸಿದ ಜಿಲ್ಲಾಧ್ಯಕ್ಷರು ರಾಣೇಬೆನ್ನೂರು ಬಂದ್ ಗೆ ಕಾರಣೀಭೂತರಾದ ಮಾಸಣಗಿಯವರನ್ನು ರಾಜ್ಯಾಧ್ಯಕ್ಷರೇಕೆ ಉಚ್ಚಾಟಿಸಿಲ್ಲ.
ಸಮ್ಮೇಳನ ಸ್ಥಳ ನಿಗದಿಪಡಿಸುವ ಅಧಿಕಾರ ಜಿಲ್ಲಾದ್ಯಕ್ಷರಿಗಿಲ್ಲ,ರಾಜ್ಯ ಸಮಿತಿ ನಿರ್ಧರಿಸುತ್ತದೆ
ಮಡಿಕೆರಿಯೋಳಗ ನಿರ್ಧರಿಸಿದಂಗ ಆಗಲಿ.
ಜಿಲ್ಲಾಧ್ಯಕ್ಷ ಪ್ರತಿದಿನ ಸಂಜೆ ಮನೆಮನೆಗೆ ಹೋಗಿ ಆಮೀಷ ಒಡ್ಡುತ್ತಿದ್ದಾರೆ.
ರಾಜ್ಯಾಧ್ಯಕ್ಷ ಹಾಲಂಬಿಯವರೇಕೆ ಹಾವೇರಿಗೆ ಬರುತ್ತಿಲ್ಲ, ಮಾಸಣಗಿಯವರೊಂದಿಗೆ ಬುಕ್ ಆಗ್ಯಾರ.
ಹಾಲಂಬಿಯವರೇ, ರಾಜಕಾರಣಿಗಳು ಜಿಲ್ಲಾಧ್ಯಕ್ಷರನ್ನು ಕೇಳಿ ಎಷ್ಟು ಕಡೆ ಸಮ್ಮೇಳನದ ಸ್ಥಳ ನಿಗದಿಪಡಿಸಿದ್ದೀರಿ?
ಒಡೆದ ಸಾಹಿತ್ಯಾಭಿಮಾನಿಗಳ ಮನಸ್ಸಿನೊಂದಿಗೆ ಹಾವೇರಿ ಜಿಲ್ಲೆಯ ಎಲ್ಲೂ ಸಮ್ಮೇಳನ ನಡೆಸುವದು ಬೇಡ.