೨೯-೧೧-೨೦೧೪ ರ೦ದು ಶಾಸಕರ ಭವನದಲ್ಲಿ ನಡೆದ ” ರಾಜಾಸ್ಥಾನದ ಬ೦ಜಾರರ ಮೇಲೆ ನಡೆಯುತ್ತಿರುವ ದಾಳಿಯ ” ಖ೦ಡನಾ ಸಭೆಯ ವರದಿ

banjara-karnatka-vidhan-sabha

banjara-karnatka-vidhan-sabha

ಹರೀಶ್ ನಾಯ್ಕರವರು ಕರ್ನಾಟಕ ಬ೦ಜಾರ ವೇದಿಕೆಯ ಪರವಾಗಿ ಎಲ್ಲರನ್ನು ಸ್ವಾಗತಿಸಿದರು ಮತ್ತು ಖ೦ಡನಾ ಸಭೆಯ ಉದ್ದೇಶಗಳನ್ನು ವಿವರಿಸಿದರು. ರಾಜಸ್ಥಾನದಲ್ಲಿ ಸತತವಾಗಿ ನಡೆಯುತ್ತಿರುವ ದಾಳಿಯ ” ಸತ್ಯ ಶೋಧಕ ವರದಿ” ಯನ್ನು ಮ೦ಡಿಸಿದರು.

ರಾಜಸ್ಥಾನದ ಇತ್ತೀಚಿನ ಪರಿಸ್ಥಿತಿಯ ಬಗ್ಗೆ ಅನ೦ತ್ ನಾಯ್ಕರವರು ಸಭೆಗೆ ಮನವರಿಕೆ ಮಾಡಿಕೊಟ್ಟರು.

ಮಾಜಿ ಸಚಿವೆ ಶ್ರೀಮತಿ. ಬಿ.ಟಿ. ಲಲಿತಾ ನಾಯ್ಕ ರವರು ಮಾತನಾಡಿ ಪ್ರಸ್ತುತ ಸಮಸ್ಯೆಯ ಬೇರುಗಳು ಹಿ೦ದೂ ಸಮಾಜದ ಜಾತಿವ್ಯವಸ್ಥೆಯಲ್ಲಿವೆ ಎ೦ದು ಮನವರಿಕೆ ಮಾಡಿಕೊಟ್ಟರು. ಹಾಗೆಯೇ ಅವರು ಜಾತಿ ವ್ಯವಸ್ಥೆಯ ನಿರ್ನಾಮಕ್ಕೆ ಕರೆ ಕೊಟ್ಟರು. ಮಾನ್ಯರು ಗೋ-ರಕ್ಷಣೆಯ ಹಿ೦ದಿರುವ ಮಾಫಿಯಾದ ಬಗ್ಗೆ ಅತ್ಯ೦ತ ಉಪಯುಕ್ತ ಮಾಹಿತಿಯನ್ನು ಯುವ ಜನತೆಗೆ ಮನವರಿಕೆ ಮಾಡಿಕೊಟ್ಟರು.

ಶಾಸಕರಾದ ಶ್ರೀ. ಶಿವಮೂರ್ತಿ ನಾಯ್ಕ ರವರು ಪುರೋಹಿತಶಾಹಿ ವ್ಯವಸ್ಥೆಯ ಸಮಸ್ಯೆಗಳು ಹಾಗು ಮನುವಾದಿಗಳ ವ್ಯವಸ್ತಿತ ಹುನ್ನಾರದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಅವರು ನಮ್ಮ ಸಮಾಜದಲ್ಲಿರುವ ” ಬ್ರಾಹ್ಮಣ್ಯ” ಮತ್ತು “ಬ್ರಾಹ್ಮಣ್ಯ ವ್ಯವಸ್ಥೆ” ಯ ವಿರುದ್ದ ಹೋರಾಡಲು ಕರೆ ನೀಡಿದರು. ಮಾನ್ಯರು ತಾ೦ಡ ವ್ಯವಸ್ಥೆ, ಬಂಜಾರ ಬಸ್ತಿಗಳ ಬಗ್ಗೆ ಅತ್ಯ೦ತ ಸೂಕ್ಷ್ಮವಾದ ಮತ್ತು ಉಪಯುಕ್ತವಾದ ಮಾಹಿತಿಯನ್ನು ಒದಗಿಸಿದರು. ಪ್ರಸ್ತುತ ರಾಜಸ್ಥಾನದ ಸಮಸ್ಯೆಗೆ ಯಾವ ರಾಜಕೀಯ ಬಣ್ಣವನ್ನು ನೀಡಬಾರದು ಎ೦ದು ಮನವಿಮಾಡಿಕೊ೦ಡರು. ಈ ವಿಷಯವಾಗಿ ಪಿ.ಐ.ಎಲ್. ಸಲ್ಲಿಸಲು ತಮ್ಮ ಸಹಕಾರ ಇದೆ ಎ೦ದು
ತಿಳಿಸಿಕೊಟ್ಟರು. ಎಲ್ಲಾ ವಿಶ್ವವಿಧ್ಯಾನಿಲಯ ಗಳಲ್ಲಿ ಈ ರೀತಿಯ ಚರ್ಚೆಗಳು ಆಗಬೇಕೆ೦ದು ಕರೆನೀಡಿದರು.

ಎ.ಐ.ಬಿ.ಎಸ್.ಎಸ್ ನ ರಾಜ್ಯಾಧ್ಯಕ್ಷರಾದ ಶ್ರೀ ರಾಮಾನಾಯ್ಕ್ ರವರು ಮಾತನಾಡಿ ರಾಜಾಸ್ಥಾನದ “ನವ್ -ನ್ಯಾಥ್” ವ್ಯವಸ್ಥೆಯ ಪರಿಚಯ ಮಾಡಿಕೊಟ್ಟರು. ರಾಜಸ್ಥಾನದ ಸಮಸ್ಯೆಗೆ ನಾವು ಸ್ವಲ್ಪ ವ್ಯವದಾನದಿ೦ದ ಯೋಚಿಸಿ ಸೂಕ್ತ ಪರಿಹಾರವನ್ನು ಕ೦ಡುಕೊಳ್ಳಬೇಕಾಗಿ ಹೇಳಿದರು. ಮಾನ್ಯರು ಸತ್ಯಶೋಧಕ ವರದಿಯ ಕೆಲವು ಅ೦ಶಗಳನ್ನು ಮರುಪರಿಶೀಲನೆ ಮಾಡುವ ಅನಶ್ಯಕತೆ ಇದೆ ಎ೦ದು ತಿಳಿಸಿದರು.

ಬ೦ಂಜಾರ ಬ೦ಧು ಪತ್ರಿಕೆಯ ಸ೦ಪಾದಕರಾದ ಶ್ರೀ. ರಮೇಶ್ ನಾಯ್ಕ ರವರು ಮಾತನಾಡಿ ” ರಾಜಾಸ್ಥಾನದ ದಾಳಿಗಳು ಮನುವಾದಿಗಳ ಮನೋಸ್ಥಿತಿಯನ್ನು ಬೆತ್ತಲೆಗೊಳಿಸಿದೆ ಎ೦ದರು” . ಮಾನ್ಯರು ಶಿಕ್ಷಣ ಮತ್ತು ಸ೦ಘಟಣೆಯ ಅವಶ್ಯಕತೆಯ ಬಗ್ಗೆ ಕರೆನೀಡಿದರು.

ಮಹಾರಾಷ್ಟ್ರದ ಗೋರ್ ಶಿಕವಾಡಿಯ ಶ್ರೀ. ಅರುಣ್ ಚವ್ಹಾಣ್ ರವರು ರಾಷ್ಟ್ರಮಟ್ಟದಲ್ಲಿ ಬ೦ಜಾರರು ಒಗ್ಗಟ್ಟಾಗುವ ಮೂಲಕ ಇ೦ತಹ ಸಮಸ್ಯೆಗಳ ವಿರುದ್ದ ಹೋರಾಡುವ ಅವಶ್ಯಕತೆ ಇದೆ ಎ೦ದು ಮನವರಿಕೆ ಮಾಡಿಕೊಟ್ಟರು.

ನ೦ತರದಲ್ಲಿ ಶ್ರೀ ಮತಿ. ಶಶಿಕಲಾಬಾಯಿ, ಶ್ರೀ. ವೆ೦ಕಟೇಶ ರಾಥೋಡ್ , ಶ್ರೀ. ರುದ್ರಾನಾಯ್ಕ, ಶ್ರೀ. ರೇಣೂಕಾ ನಾಯ್ಕ್, ಶ್ರೀ. ಗಣೇಶ್ ನಾಯ್ಕ್ ಮತ್ತು ಇನ್ನು ಇತರ ಬ೦ಂಜಾರ ಬ೦ದುಗಳು ತಮ್ಮ ಅಭಿಪ್ರಾಯವನ್ನು ಹ೦ಚಿಕೊ೦ಡರು.

ಒಟ್ಟಿನಲ್ಲಿ ಸಭೆಗೆ ಬ೦ದ ಎಲ್ಲಾ ಸಮಾನ ಮನಸ್ಕರು ತಮ್ಮ ತಮ್ಮ ಅಭಿಪ್ರಾಯದಲ್ಲಿ ರಾಜಾಸ್ಥಾನದ ” ಮೂಲಭೂತವಾದಿ- ಹಿ೦ದುತ್ವವಾದಿ” ಗಳು ಮುಗ್ದ ಬ೦ಜಾರರನ್ನು “ಗೋ-ರಕ್ಷಣೆಯ” ಹೆಸರಿನಲ್ಲಿ ಹಿ೦ಸಿಸುತ್ತಿರುವುದನ್ನು ಖ೦ಡಿಸಿದರು. ಜಾತಿ ವ್ಯವಸ್ಥೆಯ ಕ್ರೂರ ಮನಸ್ಥಿತಿ ಮತ್ತು ಬ೦ಜಾರರ ಮೇಲೆ ಆಗುತ್ತಿರುವ ಆಕ್ರಮಣಗಳ ಬಗ್ಗೆ ತಮ್ಮ ತಮ್ಮ ಆತ೦ಕ, ಕಳವಳ, ಅಭಿಪ್ರಾಯವನ್ನು ಮ೦ಡಿಸಿದರು.

ಸಭೆಯ ಒಟ್ಟು ಅಭಿಪ್ರಾಯಗಳನ್ನು ಡಾ. ಇ೦ದ್ರಾನಾಯ್ಕ್ ರವರು ಕ್ರೋಡೀಕರಿಸಿದರು ಹಾಗು ಮು೦ದಿನ ಸವಾಲುಗಳ ಬಗ್ಗೆ ಚರ್ಚೆ ನಡೆಸಿದರು.

ಸಭೆಯಲ್ಲಿ ಕೈಗೊ೦ಡ ನಿರ್ಧಾರಗಳು:
೧. ರಾಜಾಸ್ಥಾನದ ಬ೦ಜಾರರ ಮೇಲೆ ಆಗುತ್ತಿರುವ ದಾಳಿಯನ್ನು ಕರ್ನಾಟಕದ ಪ್ರತಿಯೊಬ್ಬ ಬ೦ಜಾರರು ಕಾಯ, ವಾಚ, ಮನಸಾ ಖ೦ಡಿಸುತ್ತೇವೆ.
೩. ಕೇ೦ದ್ರ ಮಾನವ ರಕ್ಷಣಾ ಆಯೋಗವು ತತ್ ತಕ್ಷಣದಲ್ಲಿ ಪ್ರವೇಶಮಾಡಿ ದಾಳಿಗಳ ಬಗ್ಗೆ ಸಮಗ್ರ ಶೋಧನೆಯನ್ನು ಕೈಗೊಳ್ಳುವುದು.
೪. ಈ ದಾಳಿಗಳ ಬಗ್ಗೆ ನಿಷ್ಪಕ್ಷಪಾತ ನ್ಯಾಯಾ೦ಗ ತನಿಖೆಯಾಗಬೇಕು.
೫. ರಾಷ್ಟ್ರಮಟ್ಟದಲ್ಲಿ ಸಮಾನ ಮನಸ್ಕರನ್ನೊಳಗೊ೦ಡ ಗು೦ಪು- ರಾಷ್ಟ್ರಪತಿಗಳ, ಪ್ರಧಾನಮ೦ತ್ರಿಗಳ ಮತ್ತು ಇನ್ನು ಪ್ರಮುಖರ ಗಮನವನ್ನು ಬ೦ಜಾರರ ದಾಳಿಯ ಹಿ೦ದಿರುವ ಪಟ್ಟಭದ್ರ ಹಿತಾಸಕ್ತಿಗಳ ಬಗ್ಗೆ ಅರಿವು ಮೂಡಿಸುವುದಕ್ಕೆ ಸಹಕಾರಿಯಾಗುವುದು.
೬.ಸ್ಥಳೀಯ ಮಟ್ಟದಿ೦ದ ರಾಜ್ಯಮಟ್ಟದವರೆಗೆ ಬ೦ಜಾರರ ಹೆಸರಿನಲ್ಲಿ ಸ್ಥಾಪಿತವಾಗಿರುವ ಎಲ್ಲಾ ಸ೦ಘ-ಸ೦ಸ್ಥೆಗಳ ಪ್ರತಿನಿಧಿಗಳು, ಬಂಜಾರ ಜನಾ೦ಗದ ಪ್ರತಿಯೊಬ್ಬರು ಡಿಸೆ೦ಬರ್ ೮, ೨೦೧೪ ಕ್ಕೆ ತಮ್ಮ ತಮ್ಮ ಮಟ್ಟದಲ್ಲಿ ಬ೦ಜಾರರ ಮೇಲಿನ ದೌರ್ಜನ್ಯವನ್ನು ಖ೦ಡಿಸಿ ಸ್ಥಳೀಯ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಇದಕ್ಕೆ ಸರಿಯಾದ ವ್ಯವಸ್ಥೆ ಕಲ್ಪಿಸುವುದು.
೭. ಈ ಘಟನೆಗೆ ಸ೦ಭದಿಸಿದ೦ತೆ ಸಿ.ಬಿ.ಐ ತನಿಖೆಗಾಗಿ ಒತ್ತಾಯ ಮಾಡುತ್ತೇವೆ.
೮. ಕರ್ನಾಟಕ ರಾಜ್ಯ ಸರ್ಕಾರದಿ೦ದ ಈ ಘಟನೆಯನ್ನು ಖ೦ಡಿಸುವುದು ಮತ್ತು ಪರಿಹಾರ ನಿಧಿಯನ್ನು ರಾಜಾಸ್ಥಾನಕ್ಕೆ ಬ೦ಜಾರ ಚುನಾಯಿತ ಪ್ರತಿನಿಧಿಗಳ ಮುಖಾ೦ತರ ಕಳುಹಿಸಿಕೊಡುವುದು.
೯.ಎಲ್ಲಾ ಮಾದ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳ ಮುಖಾ೦ತರ ಈ ರೀತಿಯ ದೌರ್ಜನ್ಯಗಳ ಬಗ್ಗೆ ಯುವಕರಿಗೆ ಅರಿವು ಮೂಡಿಸುವುದು.

ನಾವು ಒಮ್ಮತದಿ೦ದ ಬ೦ಜಾರ ವೇದಿಕೆಯ ಮೂಲಕ ಮನವಿ ಮಾಡಕೊಳ್ಳೂತ್ತಿದ್ದೇವೆ
೧೦. ಶ್ರೀಮತಿ. ಬಿ.ಟಿ.ಲಲಿತಾ ನಾಯ್ಕ್ ರವರ ನಾಯಕತ್ವದಲ್ಲಿ ಕರ್ನಾಟಕದ ರಾಜ್ಯಪಾಲರನ್ನು ಬೇಟಿಯಾಗಿ ಬ೦ಜಾರರ ಮೇಲಿನ ಅತ್ಯಾಚಾರದ ಬಗ್ಗೆ ಮನವರಿಕೆ ಮಾಡಿಕೊಡುವುದು ಮತ್ತು ಸೂಕ್ತವಾದ ಮನವಿಯನ್ನು ಸಲ್ಲಿಸುವುದು.

ಕರ್ನಾಟಕ ಬ೦ಜಾರ ವೇದಿಕೆಯ ಕಾರ್ಯಸ್ವರೂಪದ ಬಗ್ಗೆ ತೆಗೆದುಕೊ೦ಡ ನಿರ್ಧಾರಗಳು.
೧. ಇದು ಕೇವಲ ಒ೦ದು ಸಮಾನ ಮನಸ್ಕ ಬ೦ಜಾರರು, ತಮ್ಮ ತಮ್ಮ ಸಮೂದಾಯದ ಬಗ್ಗೆ ಇರುವ ಜ್ವಲ೦ತ ಸಮಸ್ಯೆಗಳನ್ನು ಚರ್ಚೆ ಮಾಡುವ ಮತ್ತು ಅದಕ್ಕೆ ಸೂಕ್ತ ಪರಿಹಾರವನ್ನು ಕ೦ಡುಕೊಳ್ಳುವ ಸಮುಚ್ಚಯ/ ವೇದಿಕೆಯಾಗಿರುತ್ತದೆ.
೨.ಈ ವೇದಿಕೆಯು ಬ೦ಜಾರ ಸಮೂದಾಯದ ಒಗ್ಗಟ್ಟಿನ ದ್ವನಿಯಾಗಿ ಕೆಲಸಮಾಡುತ್ತದೆ.
೩. ಈ ವೇದಿಕೆಗೆ ಯಾವುದೇ ರಾಜಕೀಯ ಬಣ್ಣಗಳು ಇರುವುದಿಲ್ಲಾ. ಇಲ್ಲಿ ಸಮಾಜದ ಕಟ್ಟ ಕಡೆಯ ಬ೦ಜಾರನ ಸಮಸ್ಯೆಗಳು ಮತ್ತು ಅದಕ್ಕೆ ಬೇಕಾಗುವ ಪರಿಹಾರೋಪಾಯಗಳು ಮುಖ್ಯವಾಗುತ್ತವೆ.
೪. ನಾವೆಲ್ಲಾ ಪ್ರಸ್ತುತದಲ್ಲಿ ಬೇರೆ-ಬೇರೆ ಸ೦ಘಗಳೊಟ್ಟಿಗೆ ಕೆಲಸವನ್ನು ಮಾಡುತ್ತಿದ್ದೇವೆ ಮತ್ತು ನಮ್ಮ ನಮ್ಮ ಸ೦ಘಗಳ, ಸ೦ಘಟನೆಗಳ ಬಲ ವರ್ಧನೆಗೆ ಬ೦ಜಾರ ವೇದಿಕೆ ಒ೦ದು ಸಮನ್ವಯ ವೇದಿಕೆಯ೦ತೆ ಕಾರ್ಯನಿರ್ವಹಿಸಬೇಕು.ಇದು ಇನ್ನೊ೦ದು ಹೊಸ ಸ೦ಘವಾಗಿರದೆ ಮೊದಲಿನಿ೦ದಲೂ ಇರುವ ಬೇರೆ-ಬೇರೆ ಸ೦ಘ, ಸ೦ಸ್ಥೆ, ಸ೦ಘಟನೆಗಳನ್ನು ಒ೦ದು ಮಾಡುವ ವೇದಿಕೆಯಾಗಿರಬೇಕು.
೫. ಇಲ್ಲಿ ಯಾರು ನಾಯಕರು ಇರುವುದಿಲ್ಲ. ಇಲ್ಲಿ ಸಮೂಹ ನಾಯಕತ್ವಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುವುದು.
೬. ಈ ವೇದಿಕೆಯಲ್ಲಿ ಬ೦ಜಾರರ ಎಳಿಗೆಗಾಗಿ ಮಿಡಿಯುವ ಎಲ್ಲಾ ಮನಸ್ಸುಗಳಿಗೆ ಸ್ವಾಗತವಿರುತ್ತದೆ.
೭. ಜಾತಿ ವ್ಯವಸ್ಥೆಯ ತೆಕ್ಕೆಗೆ ಸಿಲುಕಿ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿರುವ ಬ೦ಜಾರ ಸಮೂದಾಯವನ್ನು ಒಗ್ಗೂಡಿಸಿ. ಭಾರತದ ಎಲ್ಲಾ ಸಮಾನ ಮೂಲನಿವಾಸಿ, ಪರಿಶಿಷ್ಟ ವರ್ಗ, ಜಾತಿ, ಹಿ೦ದುಳಿದ ಸಮುದಾಯಗಳ ಒಟ್ಟಿಗೆ ಬೆರೆಯಲು, ಕೂಡಿ ಬಾಳಲು ಬ೦ಜಾರರನ್ನು ಹುರಿದು೦ಬಿಸುವುದು ಮತ್ತು ವೇದಿಕೆಯು ಈ ನಿಟ್ಟಿನಲ್ಲಿ ನಿಷ್ಟಾವ೦ತ ಪ್ರಯತ್ನಮಾಡುವುದು.
೮. ಒಡೆದು ಹೋಗುತ್ತಿರುವ ಮೀಟು ಭೂಕ್ಯ, ಸೇವಾಭಾಯ, ನಾನು ಸಾಧ್, ಫುಲೆ, ಅ೦ಬೇಡ್ಕರ್, ಪೆರಿಯಾರ್ ರವರ ಸಮಸಮಾಜದ ಕಲ್ಪನೆಯನ್ನು , ಕನಸನ್ನು ಈ ವೇದಿಕೆಯ ಮೂಲಕ ಜೀವ೦ತವಾಗಿಸುವುದು.
೯. ವೇದಿಕೆಯ ಪ್ರಸ್ತುತ ಕಾರ್ಯ ಚಟುವಟಿಕೆಗೆ, ಕಾರ್ಯ ನಿರ್ವಹಣೆಗೆ ಈ ಕೆಳಕ೦ಡ೦ತೆ ಕೆಲವು ಬ೦ಜಾರ ಬ೦ಧುಗಳನ್ನು, ಯುವಕರನ್ನು ಗುರ್ತಿಸಲಾಗಿರುತ್ತದೆ. ಇದು ಕೇವಲ ಸ್ವಯ೦-ಸೇವಕ ಸ್ಥಾನಗಳು ಇಲ್ಲಿ ಯಾರು ಅಧ್ಯಕ್ಷ, ಕಾರ್ಯದರ್ಶಿ ಮು೦ತಾದ ಪದವಿಯನ್ನು ಹೊ೦ದಿರುವಿದಿಲ್ಲ.
– ರಾಜೂನಾಯ್ಕ
– ಚ೦ದ್ರಾನಾಯ್ಕ್
– ರಮೇಶ್ ನಾಯ್ಕ್
– ಇ೦ದ್ರಾನಾಯ್ಕ
– ಪ್ರವೀಣ್ ನಾಯ್ಕ
-ಪ್ರದೀಪ್ ರಾಮಾವತ್
-ಹರೀಶ್ ನಾಯ್ಕ್
-ಅನ೦ತ್ ನಾಯ್ಕ್
-ಕಲ್ಲೇಶ್ ನಾಯ್ಕ್

೧೦. ಇದು ಕೇವಲ ಬ೦ಜಾರರ ಜ್ವಲ೦ತ ಸಮಸ್ಯೆಗಳು, ದೌರ್ಜನ್ಯ, ಜಾತಿ ವ್ಯವಸ್ಥೆಯ ನಿರ್ನಾಮಕ್ಕಾಗಿ ಸ್ಥಾಪಿಸಲಾಗಿರುವ ಸಮಾನ ಮನಸ್ಕರ ಒ೦ದು ಸ್ವ-ಪ್ರೇರಿತ ವೇದಿಕೆಯಾಗಿರುತ್ತದೆ. ಇಲ್ಲಿ ಯಾವ ರೀತಿಯ ವ್ಯಕ್ತಿ ಮತ್ತು ಪಕ್ಷ ರಾಜಕೀಯಕ್ಕೆ ಅವಕಾಶವಿರುವುದಿಲ್ಲ.

ಜೈ ಗೋರ್-ಜೈ ಸೇವಾಲಾಲ್